೧ ಸಮುವೇಲನು 7:13

ಫಿಲಿಷ್ಟಿಯರು ತಗ್ಗಿಸಲ್ಪಟ್ಟು ಇಸ್ರಾ ಯೇಲಿನ ಮೇರೆಯಲ್ಲಿ ಬಾರದೆ ಇದ್ದರು. ಇದಲ್ಲದೆ ಸಮುವೇಲನು ಇದ್ದ ದಿವಸಗಳೆಲ್ಲಾ ಕರ್ತನ ಕೈ ಫಿಲಿಷ್ಟಿ ಯರಿಗೆ ವಿರೋಧವಾಗಿತ್ತು.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 7

11ಆಗ ಇಸ್ರಾಯೇಲ್ಯರು ಮಿಚ್ಛೆಯಿಂದ ಹೊರಟು ಫಿಲಿಷ್ಟಿಯರನ್ನು ಹಿಂದಟ್ಟಿ ಬೇತ್ಕರಿನ ವರೆಗೂ ಅವರನ್ನು ಹೊಡೆದರು.

12ಸಮುವೇಲನು ಒಂದು ಕಲ್ಲನ್ನು ತೆಗೆದುಕೊಂಡು ಮಿಚ್ಪೆಗೂ ಶೇನಿಗೂ ಮಧ್ಯ ದಲ್ಲಿ ನಿಲ್ಲಿಸಿ--ಈವರೆಗೂ ಕರ್ತನು ನಮಗೆ ಸಹಾಯ ಮಾಡಿದ್ದಾನೆಂದು ಹೇಳಿ ಅದಕ್ಕೆ ಎಬೆನೆಜೆರ ಎಂದು ಹೆಸರಿಟ್ಟನು.

13ಫಿಲಿಷ್ಟಿಯರು ತಗ್ಗಿಸಲ್ಪಟ್ಟು ಇಸ್ರಾ ಯೇಲಿನ ಮೇರೆಯಲ್ಲಿ ಬಾರದೆ ಇದ್ದರು. ಇದಲ್ಲದೆ ಸಮುವೇಲನು ಇದ್ದ ದಿವಸಗಳೆಲ್ಲಾ ಕರ್ತನ ಕೈ ಫಿಲಿಷ್ಟಿ ಯರಿಗೆ ವಿರೋಧವಾಗಿತ್ತು.

14ಫಿಲಿಷ್ಟಿಯರು ಇಸ್ರಾ ಯೇಲಿನಿಂದ ತೆಗೆದುಕೊಂಡಿದ್ದ ಎಕ್ರೋನ್‌ ಮೊದಲು ಗೊಂಡು ಗತ್‌ ವರೆಗೂ ಇರುವ ಪಟ್ಟಣಗಳು ಇಸ್ರಾ ಯೇಲಿಗೆ ತಿರಿಗಿ ಕೊಡಲ್ಪಟ್ಟವು. ಅವುಗಳ ಮೇರೆ ಗಳನ್ನು ಇಸ್ರಾಯೇಲ್ಯರು ಫಿಲಿಷ್ಟಿಯರ ಕೈಯಿಂದ ಬಿಡಿಸಿ ಕೊಂಡರು. ಇಸ್ರಾಯೇಲಿಗೂ ಅಮೋರಿಯರಿಗೂ ಮಧ್ಯ ಸಮಾಧಾನ ಉಂಟಾಗಿತ್ತು.

15ಇದಲ್ಲದೆ ಸಮುವೇಲನು ತಾನು ಬದುಕಿದ ಎಲ್ಲಾ ದಿವಸಗಳಲ್ಲಿ ಇಸ್ರಾಯೇಲಿಗೆ ನ್ಯಾಯತೀರಿಸಿದನು.

೧ ಸಮುವೇಲನು 7 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी