ನೆಹೆಮಿಯ 13:15

ಆ ದಿವಸಗಳಲ್ಲಿ ನಾನು ಯೆಹೂದದೊಳಗೆ ಸಬ್ಬತ್ತುಗಳಲ್ಲಿ ಕೆಲವರು ದ್ರಾಕ್ಷೆ ತುಳಿಯುವದನ್ನೂ ಸಿವುಡುಗಳನ್ನು ತರುವದನ್ನೂ ಕತ್ತೆಗಳ ಮೇಲೆ ಹೇರಿ ಕೊಂಡು ಬರುವದನ್ನೂ ಮತ್ತು ಸಬ್ಬತ್ತುಗಳಲ್ಲಿ ಯೆರೂಸಲೇಮಿಗೆ ದ್ರಾಕ್ಷಾರಸವನ್ನೂ ದ್ರಾಕ್ಷೆ ಹಣ್ಣು ಗಳನ್ನೂ ಅಂಜೂರದ ಹಣ್ಣುಗಳನ್ನೂ ಎಲ್ಲಾ ಹೊರೆ ಗಳನ್ನೂ ತರುವದನ್ನು ನಾನು ನೋಡಿದ್ದರಿಂದ ಮಾರುವ ದಿವಸದಲ್ಲಿ ನಾನು ಸಾಕ್ಷಿಯಾಗಿ ಹೇಳಿದೆನು.

ಸಂದರ್ಭದೊಂದಿಗೆ ಓದಿ · ನೆಹೆಮಿಯ 13

13ಆಗ ನಾನು ಯಾಜಕನಾದ ಶೆಲೆಮ್ಯನನ್ನೂ ಶಾಸ್ತ್ರಿಯಾದ ಚಾದೋಕನನ್ನೂ ಲೇವಿ ಯರಲ್ಲಿರುವ ಪೆದಾಯನನ್ನೂ ಅವರಿಗೆ ಸಹಾಯವಾಗಿ ಮತ್ತನ್ಯನ ಮಗನಾದ ಜಕ್ಕೂರನ ಮಗನಾದ ಹಾನಾ ನನನ್ನೂ ಬೊಕ್ಕಸಗಳ ಮೇಲೆ ನೇಮಿಸಿದೆನು; ಅವರು ನಂಬಿಗಸ್ತರೆಂದು ಎಣಿಸಲ್ಪಟ್ಟಿದ್ದರು. ತಮ್ಮ ಸಹೋ ದರರಿಗೆ ವಿಭಾಗಿಸುವದು ಅವರ ಕೆಲಸವಾಗಿತ್ತು.

14ನನ್ನ ದೇವರೇ, ಇದಕ್ಕೋಸ್ಕರ ನನ್ನನ್ನು ಜ್ಞಾಪಕ ಮಾಡು; ನಾನು ದೇವರ ಆಲಯಕೋಸ್ಕರವೂ ಅದರ ವಿಚಾರಗಳಿಗೋಸ್ಕರವೂ ಮಾಡಿದ ನನ್ನ ಕೆಲಸಗ ಳನ್ನು ಅಳಿಸಿಬಿಡಬೇಡ.

15ಆ ದಿವಸಗಳಲ್ಲಿ ನಾನು ಯೆಹೂದದೊಳಗೆ ಸಬ್ಬತ್ತುಗಳಲ್ಲಿ ಕೆಲವರು ದ್ರಾಕ್ಷೆ ತುಳಿಯುವದನ್ನೂ ಸಿವುಡುಗಳನ್ನು ತರುವದನ್ನೂ ಕತ್ತೆಗಳ ಮೇಲೆ ಹೇರಿ ಕೊಂಡು ಬರುವದನ್ನೂ ಮತ್ತು ಸಬ್ಬತ್ತುಗಳಲ್ಲಿ ಯೆರೂಸಲೇಮಿಗೆ ದ್ರಾಕ್ಷಾರಸವನ್ನೂ ದ್ರಾಕ್ಷೆ ಹಣ್ಣು ಗಳನ್ನೂ ಅಂಜೂರದ ಹಣ್ಣುಗಳನ್ನೂ ಎಲ್ಲಾ ಹೊರೆ ಗಳನ್ನೂ ತರುವದನ್ನು ನಾನು ನೋಡಿದ್ದರಿಂದ ಮಾರುವ ದಿವಸದಲ್ಲಿ ನಾನು ಸಾಕ್ಷಿಯಾಗಿ ಹೇಳಿದೆನು.

16ಇದಲ್ಲದೆ ವಿಾನುಗಳನ್ನೂ ಎಲ್ಲಾ ಸರುಕುಗಳನ್ನೂ ತಕ್ಕೊಂಡು ಬಂದು ಸಬ್ಬತ್‌ ದಿವಸದಲ್ಲಿ ಯೆಹೂದದ ಮಕ್ಕಳಿಗೆ ಮಾರುವ ತೂರಿನವರು ಯೆರೂಸಲೇಮಿ ನಲ್ಲಿ ವಾಸವಾಗಿದ್ದರು.

17ಆಗ ನಾನು ಯೆಹೂದದ ಶ್ರೇಷ್ಠರನ್ನು ಗದರಿಸಿ, ಅವರಿಗೆ -- ಸಬ್ಬತ್‌ ದಿನವನ್ನು ನೀವು ಅಪವಿತ್ರಮಾಡುವ ಈ ಕೆಟ್ಟಕಾರ್ಯವೇನು?

ನೆಹೆಮಿಯ 13 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी