ಪಿಲಾತನು ಪ್ರಧಾನಯಾಜಕರನ್ನೂ ಅಧಿಕಾರಿಗಳ ನ್ನೂ ಜನರನ್ನೂ ಒಟ್ಟಾಗಿ ಕರೆಸಿ ಅವರಿಗೆ--
11ಹೆರೋದನು ತನ್ನ ಯುದ್ಧಭಟರೊಂದಿಗೆ ಆತನನ್ನು ತಿರಸ್ಕರಿಸಿ ಹಾಸ್ಯಮಾಡಿ ಆತನ ಮೇಲೆ ಶೋಭಾಯಮಾನವಾದ ವಸ್ತ್ರವನ್ನು ಹೊದಿಸಿ ಆತನನ್ನು ತಿರಿಗಿ ಪಿಲಾತನ ಬಳಿಗೆ ಕಳುಹಿಸಿ ದನು.
12ಇದಲ್ಲದೆ ಪಿಲಾತನು ಹೆರೋದನು ಅದೇ ದಿನದಲ್ಲಿ ಒಬ್ಬರಿಗೊಬ್ಬರು ಸ್ನೇಹಿತರಾದರು; ಯಾಕಂ ದರೆ ಅವರಲ್ಲಿ ಮೊದಲು ಹಗೆತನವಿತ್ತು.
13ಪಿಲಾತನು ಪ್ರಧಾನಯಾಜಕರನ್ನೂ ಅಧಿಕಾರಿಗಳ ನ್ನೂ ಜನರನ್ನೂ ಒಟ್ಟಾಗಿ ಕರೆಸಿ ಅವರಿಗೆ--
14ಜನರು ತಿರಿಗಿ ಬೀಳುವಂತೆ ಮಾಡುತ್ತಾನೆಂದು ನೀವು ಈ ಮನುಷ್ಯನನ್ನು ನನ್ನ ಬಳಿಗೆ ತಂದಿದ್ದೀರಿ; ಇಗೋ, ನೀವು ಈತನ ಮೇಲೆ ತಂದಿರುವ ದೂರುಗಳನ್ನು ನಾನು ನಿಮ್ಮ ಮುಂದೆಯೇ ವಿಚಾರಿಸಿದಾಗ ಈತನಲ್ಲಿ ನನಗೆ ಯಾವ ತಪ್ಪೂ ಕಾಣಲಿಲ್ಲ.
15ಮಾತ್ರವಲ್ಲದೆ ಹೆರೋದ ನಿಗೆ ಸಹ ಯಾವದೂ ಕಾಣಲಿಲ್ಲ; ಯಾಕಂದರೆ ನಾನು ನಿಮ್ಮನ್ನು ಅವನ ಬಳಿಗೆ ಕಳುಹಿಸಿದೆನು; ಇಗೋ, ಅವನೂ ಆತನಲ್ಲಿ ಮರಣಕ್ಕೆ ಯೋಗ್ಯವಾದದ್ದೇನೂ ಕಾಣಲಿಲ್ಲ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ