೨ ಪೂರ್ವಕಾಲವೃತ್ತಾಂತ 26:18

ಉಜ್ಜೀಯನೇ, ಕರ್ತ ನಿಗೆ ಧೂಪಸುಡುವದು ನಿನಗೆ ಸೇರಿದ್ದಲ್ಲ; ಧೂಪ ಸುಡುವದು ಪರಿಶುದ್ಧ ಮಾಡಲ್ಪಟ್ಟ ಯಾಜಕರಾದ ಆರೋನನ ಮಕ್ಕಳಿಗೆ ಸೇರಿದ್ದು; ನೀನು ಪರಿಶುದ್ಧ ಸ್ಥಾನದಿಂದ ಹೊರಟುಹೋಗು; ನೀನು ಅಪರಾಧ ಮಾಡಿದ್ದೀ. ದೇವರಾದ ಕರ್ತನಿಂದ ಇದು ನಿನಗೆ ಮಾನವಲ್ಲ ಅಂದರು.

ಸಂದರ್ಭದೊಂದಿಗೆ ಓದಿ · ೨ ಪೂರ್ವಕಾಲವೃತ್ತಾಂತ 26

16ಆದರೆ ಅವನು ಬಲ ಹೊಂದಿದ ಮೇಲೆ ಅವನ ಹೃದಯವು ನಾಶನಕ್ಕೆ ಎತ್ತಲ್ಪಟ್ಟಿತು. ಏನಂದರೆ, ಅವನು ಧೂಪಪೀಠದ ಮೇಲೆ ಧೂಪ ಸುಡುವದಕ್ಕೆ ಕರ್ತನ ಆಲಯದಲ್ಲಿ ಪ್ರವೇಶಿಸಿ ತನ್ನ ದೇವರಾದ ಕರ್ತ ನಿಗೆ ವಿರೋಧವಾಗಿ ಅಪರಾಧ ಮಾಡಿದನು.

17ಆಗ ಯಾಜಕನಾದ ಅಜರ್ಯನು ಅವನ ಸಂಗಡ ಪರಾ ಕ್ರಮವುಳ್ಳ ಕರ್ತನ ಯಾಜಕರಾದ ಎಂಭತ್ತು ಮಂದಿಯು ಅರಸನಾದ ಉಜ್ಜೀಯನ ಹಿಂದೆ ಪ್ರವೇ ಶಿಸಿ ಅವನನ್ನು ಎದುರಿಸಿ--

18ಉಜ್ಜೀಯನೇ, ಕರ್ತ ನಿಗೆ ಧೂಪಸುಡುವದು ನಿನಗೆ ಸೇರಿದ್ದಲ್ಲ; ಧೂಪ ಸುಡುವದು ಪರಿಶುದ್ಧ ಮಾಡಲ್ಪಟ್ಟ ಯಾಜಕರಾದ ಆರೋನನ ಮಕ್ಕಳಿಗೆ ಸೇರಿದ್ದು; ನೀನು ಪರಿಶುದ್ಧ ಸ್ಥಾನದಿಂದ ಹೊರಟುಹೋಗು; ನೀನು ಅಪರಾಧ ಮಾಡಿದ್ದೀ. ದೇವರಾದ ಕರ್ತನಿಂದ ಇದು ನಿನಗೆ ಮಾನವಲ್ಲ ಅಂದರು.

19ಆಗ ಉಜ್ಜೀಯನು ಕೋಪಿಸಿ ಕೊಂಡನು; ಧೂಪವನ್ನು ಸುಡಲು ಅವನ ಕೈಯಲ್ಲಿ ಧೂಪಾರತಿ ಇತ್ತು. ಅವನು ಯಾಜಕರ ಮೇಲೆ ಕೋಪ ಮಾಡುವಾಗ ಕರ್ತನ ಮಂದಿರದಲ್ಲಿರುವ ಧೂಪಪೀಠದ ಬಳಿಯಲ್ಲಿ ನಿಂತ ಯಾಜಕರ ಮುಂದೆ ಅವನ ಹಣೆಯಲ್ಲಿ ಕುಷ್ಠವು ಎದ್ದಿತು.

20ಆಗ ಪ್ರಧಾನ ಯಾಜಕನಾದ ಅಜರ್ಯನೂ ಯಾಜಕರೆಲ್ಲರೂ ಅವ ನನ್ನು ದೃಷ್ಟಿಸಿದಾಗ ಇಗೋ, ಅವನು ತನ್ನ ಹಣೆ ಯಲ್ಲಿ ಕುಷ್ಠವುಳ್ಳವನಾಗಿದ್ದನು. ಆದದರಿಂದ ಅವರು ಅವನನ್ನು ಅಲ್ಲಿಂದ ದೊಬ್ಬಿಹಾಕಿದರು. ಕರ್ತನು ಅವ ನನ್ನು ಹೊಡೆದದ್ದರಿಂದ ಅವನು ಹೊರಗೆ ಹೋಗಲು ತ್ವರೆಪಟ್ಟನು.

೨ ಪೂರ್ವಕಾಲವೃತ್ತಾಂತ 26 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी