ಒಬ್ಬ ಪುರುಷನಿಗಾಗಲಿ ಸ್ತ್ರೀಗಾಗಲಿ ತಲೆಯ ಮೇಲಾಗಲಿ ಗಡ್ಡದ ಮೇಲಾಗಲಿ ವ್ಯಾಧಿಯು ಇದ್ದರೆ
27ಯಾಜಕನು ಅವನನ್ನು ಏಳನೆಯ ದಿನದಲ್ಲಿ ನೋಡಬೇಕು. ಆಗ ಅದು ಚರ್ಮದ ಹೊರಗೆಲ್ಲಾ ಹೆಚ್ಚಾಗಿ ಹರಡಿದ್ದರೆ ಯಾಜಕನು ಅವನನ್ನು ಅಶುದ್ಧನೆಂದು ಹೇಳಬೇಕು, ಅದು ಕುಷ್ಠ ವ್ಯಾಧಿಯೇ.
28ಆ ಹೊಳಪಾದ ಮಚ್ಚೆಯು ಅದೇ ಸ್ಥಳದಲ್ಲಿ ಉಳಿದಿದ್ದರೆ ಮತ್ತು ಚರ್ಮದಲ್ಲಿ ಹರಡದೆ ಸ್ವಲ್ಪ ಮೊಬ್ಬಾಗಿದ್ದರೆ ಅದು ಬೊಬ್ಬೆಯ ಊತವೆಂದು ಅವನು ಶುದ್ಧನೆಂದು ಯಾಜಕನು ನುಡಿಯಬೇಕು; ಅದು ಬೆಂಕಿಯ ಬೊಬ್ಬೆಯಾಗಿರುವದು.
29ಒಬ್ಬ ಪುರುಷನಿಗಾಗಲಿ ಸ್ತ್ರೀಗಾಗಲಿ ತಲೆಯ ಮೇಲಾಗಲಿ ಗಡ್ಡದ ಮೇಲಾಗಲಿ ವ್ಯಾಧಿಯು ಇದ್ದರೆ
30ಆಗ ಯಾಜಕನು ಆ ವ್ಯಾಧಿಯನ್ನು ನೋಡಬೇಕು. ಇಗೋ, ಅದು ನೋಡುವದಕ್ಕೆ ಚರ್ಮಕ್ಕಿಂತಲೂ ಆಳವಾಗಿದ್ದರೆ ಮತ್ತು ಅದರಲ್ಲಿ ಹಳದಿಯ ತೆಳ್ಳನೆಯ ಕೂದಲಿದ್ದರೆ ಯಾಜಕನು ಆಗ ಅವನು ಅಶುದ್ಧನೆಂದು ಹೇಳಬೇಕು; ಅದು ಒಣಗಿದ ಇಸಬಾಗಿರುವದು. ಅದು ತಲೆಯ ಮೇಲಾಗಲಿ ಗಡ್ಡದ ಮೇಲಾಗಲಿ ಇರುವ ಕುಷ್ಠವಾಗಿದೆ.
31ಯಾಜಕನು ಈ ಇಸಬಿನ ವ್ಯಾಧಿಯನ್ನು ನೋಡಿದಾಗ ಇಗೋ, ಅದು ನೋಡಲು ಚರ್ಮಕ್ಕಿಂತಲೂ ಆಳವಾಗಿರದಿದ್ದರೆ ಮತ್ತು ಕಪ್ಪು ಕೂದಲು ಇರದಿದ್ದರೆ ಯಾಜಕನು ಆಗ ಆ ಇಸಬಿನ ವ್ಯಾಧಿಯವನನ್ನು ಏಳು ದಿನಗಳು ಮುಚ್ಚಿಡಬೇಕು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ