ಯೆಹೋಶುವ 22:6

ಯೆಹೋಶುವನು ಅವರನ್ನು ಆಶೀರ್ವದಿಸಿ ಕಳುಹಿಸಿದ ಮೇಲೆ ಅವರು ತಮ್ಮ ಡೇರೆಗಳಿಗೆ ಹೋದರು.

ಸಂದರ್ಭದೊಂದಿಗೆ ಓದಿ · ಯೆಹೋಶುವ 22

4ಈಗ ನಿಮ್ಮ ದೇವರಾದ ಕರ್ತನು ಅವರಿಗೆ ವಾಗ್ದಾನಮಾಡಿದ ಪ್ರಕಾರ ನಿಮ್ಮ ಸಹೋದರರಿಗೆ ವಿಶ್ರಾಂತಿ ಕೊಟ್ಟನು. ಮತ್ತು ಕರ್ತನ ಸೇವಕನಾದ ಮೋಶೆಯು ಯೊರ್ದನಿಗೆ ಆಚೆ ನಿಮಗೆ ಕೊಟ್ಟ ಸ್ವಾಸ್ತ್ಯವಾದ ನಿಮ್ಮ ದೇಶದಲ್ಲಿರುವ ನಿಮ್ಮ ಡೇರೆಗಳಿಗೆ ತಿರಿಗಿ ಹೋಗಿರಿ.

5ಆದರೆ ಕರ್ತನ ಸೇವಕನಾದ ಮೋಶೆಯು ನಿಮಗೆ ಆಜ್ಞಾಪಿಸಿದ ಆಜ್ಞೆ ಯನ್ನೂ ನ್ಯಾಯಪ್ರಮಾಣವನ್ನೂ ಜಾಗ್ರತೆಯಾಗಿ ಕೈಕೊಂಡು ನಡೆದು ನಿಮ್ಮ ದೇವರಾದ ಕರ್ತನನ್ನು ಪ್ರೀತಿಮಾಡಿ ಆತನ ಎಲ್ಲಾ ಮಾರ್ಗಗಳಲ್ಲಿ ನಡೆದು ಆತನ ಆಜ್ಞೆಗಳನ್ನು ಕೈಕೊಂಡು ಆತನನ್ನು ಅಂಟಿ ಕೊಂಡು ಆತನನ್ನು ನಿಮ್ಮ ಪೂರ್ಣಹೃದಯ ದಿಂದಲೂ ಪೂರ್ಣಪ್ರಾಣದಿಂದಲೂ ಸೇವಿಸಿರಿ ಎಂದು ಹೇಳಿದನು.

6ಯೆಹೋಶುವನು ಅವರನ್ನು ಆಶೀರ್ವದಿಸಿ ಕಳುಹಿಸಿದ ಮೇಲೆ ಅವರು ತಮ್ಮ ಡೇರೆಗಳಿಗೆ ಹೋದರು.

7ಮನಸ್ಸೆಯ ಅರ್ಧ ಗೋತ್ರಕ್ಕೆ ಮೋಶೆಯು ಬಾಷಾನಿನಲ್ಲಿ ಸ್ವಾಸ್ತ್ಯ ಕೊಟ್ಟಿದ್ದನು. ಆದರೆ ಅವರ ಉಳಿದ ಅರ್ಧ ಗೋತ್ರಕ್ಕೆ ಯೆಹೋ ಶುವನು ಯೊರ್ದನಿನ ಪಶ್ಚಿಮಕ್ಕೆ ಅವರ ಸಹೋದರರ ನಡುವೆ ಸ್ವಾಸ್ತ್ಯವನ್ನು ಕೊಟ್ಟನು. ಇದಲ್ಲದೆ ಯೆಹೋ ಶುವನು ಅವರನ್ನು ಅವರ ಡೇರೆಗಳಿಗೆ ಕಳುಹಿಸಿ ಬಿಡುವಾಗ ಅವರನ್ನು ಆಶೀರ್ವದಿಸಿದನು.

8ಅವ ರೊಂದಿಗೆ ಮಾತನಾಡಿ--ನೀವು ಬಹು ಆಸ್ತಿಯುಳ್ಳವ ರಾಗಿ ಪಶುಕುರಿ ಬೆಳ್ಳಿ, ಬಂಗಾರ, ತಾಮ್ರ, ಕಬ್ಬಿಣವನ್ನು ಬಹು ಹೆಚ್ಚಾದ ವಸ್ತ್ರಗಳೊಂದಿಗೆ ಹಿಂತಿರುಗಿ ನಿಮ್ಮ ಡೇರೆಗಳಿಗೆ ಹೋಗಿ ನಿಮ್ಮ ಶತ್ರುಗಳ ಕೊಳ್ಳೆಯನ್ನು ನಿಮ್ಮ ಸಹೋದರರ ಸಂಗಡ ಹಂಚಿಕೊಳ್ಳಿರಿ ಅಂದನು.

ಯೆಹೋಶುವ 22 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी