೨ ಪೂರ್ವಕಾಲವೃತ್ತಾಂತ 23:19

ಕರ್ತನ ಆಲಯದಲ್ಲಿ ಯಾವ ಅಪವಿತ್ರವಾದದ್ದೂ ಒಳಗೆ ಪ್ರವೇಶಿಸದ ಹಾಗೆ ಬಾಗಲುಗಳ ಬಳಿಯಲ್ಲಿ ದ್ವಾರಪಾಲಕರನ್ನು ಇರಿಸಿ ದನು.

ಸಂದರ್ಭದೊಂದಿಗೆ ಓದಿ · ೨ ಪೂರ್ವಕಾಲವೃತ್ತಾಂತ 23

17ಸಮಸ್ತ ಜನರು ಬಾಳನ ಮನೆಗೆ ಹೋಗಿ ಅದನ್ನು ಕೆಡವಿಹಾಕಿ ಅದರ ಬಲಿಪೀಠಗಳನ್ನೂ ವಿಗ್ರಹಗಳನ್ನೂ ಒಡೆದುಬಿಟ್ಟು ಬಾಳನ ಪೂಜಾರಿಯಾದ ಮತ್ತಾನನನ್ನು ಬಲಿ ಪೀಠಗಳ ಮುಂದೆ ಕೊಂದುಹಾಕಿದರು.

18ಇದಲ್ಲದೆ ಯೆಹೋ ಯಾದನು ಕರ್ತನ ಆಲಯದ ಪರಿಚಾರಕರನ್ನು ನೇಮಿ ಸಿದನು. ಮೋಶೆಯ ನ್ಯಾಯಪ್ರಮಾಣದಲ್ಲಿ ಬರೆದಿ ರುವ ಹಾಗೆ ಸಂತೋಷದಿಂದಲೂ ಸಂಗೀತದಿಂದಲೂ ದಾವೀದನಿಂದ ನೇಮಿಸಲ್ಪಟ್ಟ ಹಾಗೆ ದಾವೀದನು ಕರ್ತನ ದಹನಬಲಿಗಳನ್ನು ಅರ್ಪಿಸುವದಕ್ಕೆ ಕರ್ತನ ಆಲಯ ದಲ್ಲಿ ವಿಭಾಗಿಸಿದ ಲೇವಿಯರಾದ ಯಾಜಕರಿಂದ ಅವರನ್ನು ನೇಮಿಸಿದನು.

19ಕರ್ತನ ಆಲಯದಲ್ಲಿ ಯಾವ ಅಪವಿತ್ರವಾದದ್ದೂ ಒಳಗೆ ಪ್ರವೇಶಿಸದ ಹಾಗೆ ಬಾಗಲುಗಳ ಬಳಿಯಲ್ಲಿ ದ್ವಾರಪಾಲಕರನ್ನು ಇರಿಸಿ ದನು.

20ಅವನು ಶತಾಧಿಪತಿಗಳನ್ನೂ ಗೌರವಸ್ಥರನ್ನೂ ಜನರ ಅಧಿಪತಿಗಳನ್ನೂ ದೇಶದ ಜನರೆಲ್ಲರನ್ನೂ ಕರ ಕೊಂಡು ಅರಸನನ್ನು ಕರ್ತನ ಆಲಯದಿಂದ ಕರ ತಂದನು. ಅವರು ಎತ್ತರವಾದ ಬಾಗಲಿನಿಂದ ಅರಸನ ಮನೆಗೆ ಬಂದು ಅರಸನನ್ನು ರಾಜ್ಯದ ಸಿಂಹಾಸನದ ಮೇಲೆ ಕೂಡ್ರಿಸಿದರು.

21ಅವರು ಅತಲ್ಯಳನ್ನು ಕತ್ತಿ ಯಿಂದ ಕೊಂದ ತರುವಾಯ ದೇಶದ ಜನರೆಲ್ಲರೂ ಸಂತೋಷಪಟ್ಟರು, ಪಟ್ಟಣವು ಶಾಂತವಾಯಿತು.

೨ ಪೂರ್ವಕಾಲವೃತ್ತಾಂತ 23 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी