ವಿಮೋಚನಕಾಂಡ 34:30

ಆದರೆ ಆರೋನನೂ ಇಸ್ರಾಯೇಲ್‌ ಮಕ್ಕಳೆಲ್ಲರೂ ಮೋಶೆ ಯನ್ನು ನೋಡಿದಾಗ ಇಗೋ, ಅವನ ಮುಖವು ಪ್ರಕಾಶಿಸುತ್ತಿತ್ತು. ಆದದರಿಂದ ಅವರು ಅವನ ಹತ್ತಿರ ಬರುವದಕ್ಕೆ ಭಯಪಟ್ಟರು.

ಸಂದರ್ಭದೊಂದಿಗೆ ಓದಿ · ವಿಮೋಚನಕಾಂಡ 34

28ಮೋಶೆಯು ನಾಲ್ವತ್ತು ಹಗಲು ನಾಲ್ವತ್ತು ರಾತ್ರಿ ರೊಟ್ಟಿಯನ್ನು ತಿನ್ನದೆ ನೀರನ್ನು ಕುಡಿಯದೆ ಅಲ್ಲಿ ಕರ್ತನ ಸಂಗಡ ಇದ್ದನು. ಆತನು ಒಡಂಬಡಿಕೆಯ ವಾಕ್ಯಗಳಾದ ಹತ್ತು ಆಜ್ಞೆಗಳನ್ನು ಹಲಗೆಗಳ ಮೇಲೆ ಬರೆದನು.

29ಮೋಶೆಯು ಸಾಕ್ಷಿಯ ಎರಡು ಹಲಗೆಗಳನ್ನು ತನ್ನ ಕೈಯಲ್ಲಿ ಹಿಡುಕೊಂಡು ಸೀನಾಯಿ ಬೆಟ್ಟದಿಂದ ಇಳಿದಾಗ ಅವನು ದೇವರ ಸಂಗಡ (ಬೆಟ್ಟದಲ್ಲಿ) ಮಾತನಾಡಿದ್ದರಿಂದ ಅವನ ಮುಖವು ಪ್ರಕಾಶಿ ಸುತ್ತಿದೆ ಎಂದು ಮೋಶೆಗೆ ತಿಳಿಯಲಿಲ್ಲ.

30ಆದರೆ ಆರೋನನೂ ಇಸ್ರಾಯೇಲ್‌ ಮಕ್ಕಳೆಲ್ಲರೂ ಮೋಶೆ ಯನ್ನು ನೋಡಿದಾಗ ಇಗೋ, ಅವನ ಮುಖವು ಪ್ರಕಾಶಿಸುತ್ತಿತ್ತು. ಆದದರಿಂದ ಅವರು ಅವನ ಹತ್ತಿರ ಬರುವದಕ್ಕೆ ಭಯಪಟ್ಟರು.

31ಮೋಶೆಯು ಅವರನ್ನು ಕರೆದಾಗ ಆರೋನನೂ ಸಭೆಯ ಮುಖ್ಯಸ್ಥರೆಲ್ಲರೂ ಅವನ ಬಳಿಗೆ ತಿರಿಗಿ ಬಂದರು. ಮೋಶೆಯು ಅವರ ಸಂಗಡ ಮಾತನಾಡಿದನು.

32ತರುವಾಯ ಇಸ್ರಾ ಯೇಲ್‌ ಮಕ್ಕಳೆಲ್ಲರೂ ಹತ್ತಿರ ಬಂದರು. ಅವನು ತನಗೆ ಕರ್ತನು ಸೀನಾಯಿ ಬೆಟ್ಟದಲ್ಲಿ ಹೇಳಿದವುಗಳ ನ್ನೆಲ್ಲಾ ಅವರಿಗೆ ಆಜ್ಞಾಪಿಸಿ ಹೇಳಿದನು.

ವಿಮೋಚನಕಾಂಡ 34 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी