ಆದಿಕಾಂಡ 20:14

ಆಗ ಅಬೀಮೆಲೆಕನು ಕುರಿಎತ್ತುಗಳನ್ನೂ ದಾಸ ದಾಸಿಯರನ್ನೂ ಅಬ್ರಹಾಮನಿಗೆ ಕೊಟ್ಟು ಅವನ ಹೆಂಡತಿಯಾದ ಸಾರಳನ್ನು ಅವನಿಗೆ ಒಪ್ಪಿಸಿದನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 20

12ಇದಲ್ಲದೆ ನಿಶ್ಚಯವಾಗಿ ಅವಳು ನನ್ನ ತಂಗಿ; ಆಕೆಯು ನನ್ನ ತಾಯಿಯ ಮಗಳಲ್ಲ, ನನ್ನ ತಂದೆಯ ಮಗಳೇ; ನನಗೆ ಹೆಂಡತಿಯಾದಳು.

13ದೇವರು ನನ್ನ ತಂದೆಯ ಮನೆಯಿಂದ ನನ್ನನ್ನು ದೇಶಾಂತರಕ್ಕೆ ಹೋಗಲು ಕರೆದಾಗ ನಾನು ಅವಳಿಗೆ--ನೀನು ನನಗೆ ತೋರಿಸತಕ್ಕ ದಯವು ಯಾವದಂದರೆ, ನಾವು ಹೋಗುವ ಪ್ರತಿಯೊಂದು ಸ್ಥಳದಲ್ಲಿ ನನ್ನ ವಿಷಯವಾಗಿ-- ಇವನು ನನ್ನ ಅಣ್ಣನೆಂಬದಾಗಿ ಹೇಳೆಂದು ಅಂದೆನು.

14ಆಗ ಅಬೀಮೆಲೆಕನು ಕುರಿಎತ್ತುಗಳನ್ನೂ ದಾಸ ದಾಸಿಯರನ್ನೂ ಅಬ್ರಹಾಮನಿಗೆ ಕೊಟ್ಟು ಅವನ ಹೆಂಡತಿಯಾದ ಸಾರಳನ್ನು ಅವನಿಗೆ ಒಪ್ಪಿಸಿದನು.

15ಅಬೀಮೆಲೆಕನು--ಇಗೋ, ನನ್ನ ದೇಶವು ನಿನ್ನ ಮುಂದೆ ಇದೆ; ನಿನಗೆ ಇಷ್ಟವಾಗಿರುವ ಸ್ಥಳದಲ್ಲಿ ವಾಸಮಾಡು ಅಂದನು.

16ಸಾರಳಿಗೆ--ಇಗೋ, ನಿನ್ನ ಅಣ್ಣನಿಗೆ ಸಾವಿರ ಬೆಳ್ಳಿಯ ಹಣ ಕೊಟ್ಟಿದ್ದೇನೆ; ನಿನ್ನ ಸಂಗಡ ಇರುವವರೆಲ್ಲರಿಗಾಗಿಯೂ ಉಳಿದವರೆ ಲ್ಲರಿಗಾಗಿಯೂ ಇವನು ನಿನಗೆ ಕಣ್ಣಿನ ಮುಸುಕಿನಂತೆ ಇರಲಿ ಅಂದನು. ಹೀಗೆ ಆಕೆಯು ಗದರಿಸಲ್ಪಟ್ಟಳು.

ಆದಿಕಾಂಡ 20 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी