ಧರ್ಮೋಪದೇಶಕಾಂಡ 10:3

ಈ ಪ್ರಕಾರ ನಾನು ಶಿಟ್ಟೀಮ್‌ ಮರದ ಮಂಜೂಷವನ್ನು ಮಾಡಿ ಕಲ್ಲಿನ ಎರಡು ಹಲಗೆಗಳನ್ನು ಮುಂಚಿನವುಗಳ ಹಾಗೆ ಕೆತ್ತಿ ಆ ಎರಡು ಹಲಗೆಗಳನ್ನು ಕೈಯಲ್ಲಿ ಹಿಡುಕೊಂಡು ಬೆಟ್ಟವನ್ನೇರಿದೆನು.

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 10

1ಆ ಕಾಲದಲ್ಲಿ ಕರ್ತನು ನನಗೆ--ಮೊದಲಿ ನವುಗಳ ಹಾಗೆ ಎರಡು ಕಲ್ಲಿನ ಹಲಗೆ ಗಳನ್ನು ನೀನು ಕೆತ್ತಿಕೊಂಡು ಬೆಟ್ಟವನ್ನೇರಿ ನನ್ನ ಬಳಿಗೆ ಬಾ; ಮರದ ಮಂಜೂಷವನ್ನು ನಿನಗೆ ಮಾಡಿಕೊಳ್ಳ ಬೇಕು.

2ಆಗ ನೀನು ಒಡೆದ ಆ ಮೊದಲಿನ ಹಲಗೆಗಳ ಮೇಲಿದ್ದ ಮಾತುಗಳನ್ನು ಈ ಹಲಗೆಗಳ ಮೇಲೆ ಬರೆಯುವೆನು; ಆ ಮೇಲೆ ನೀನು ಅವುಗಳನ್ನು ಮಂಜೂ ಷದಲ್ಲಿ ಇಡಬೇಕು ಎಂದು ಹೇಳಿದನು.

3ಈ ಪ್ರಕಾರ ನಾನು ಶಿಟ್ಟೀಮ್‌ ಮರದ ಮಂಜೂಷವನ್ನು ಮಾಡಿ ಕಲ್ಲಿನ ಎರಡು ಹಲಗೆಗಳನ್ನು ಮುಂಚಿನವುಗಳ ಹಾಗೆ ಕೆತ್ತಿ ಆ ಎರಡು ಹಲಗೆಗಳನ್ನು ಕೈಯಲ್ಲಿ ಹಿಡುಕೊಂಡು ಬೆಟ್ಟವನ್ನೇರಿದೆನು.

4ಆ ಹಲಗೆಗಳ ಮೇಲೆ ಕರ್ತನು ಮುಂಚೆ ಬರೆದ ಪ್ರಕಾರ ಆತನು ನಿಮಗೆ ಬೆಟ್ಟದಲ್ಲಿ ಬೆಂಕಿಯೊಳಗಿಂದ ಸಭೆಯ ದಿವಸದಲ್ಲಿ ಹೇಳಿದ ಹತ್ತು ಆಜ್ಞೆಗಳನ್ನು ಬರೆದು ನನಗೆ ಕೊಟ್ಟನು.

5ತರುವಾಯ ನಾನು ತಿರುಗಿಕೊಂಡು ಬೆಟ್ಟದಿಂದ ಇಳಿದು ಆ ಹಲಗೆ ಗಳನ್ನು ನಾನು ಮಾಡಿದ ಮಂಜೂಷದಲ್ಲಿ ಇಟ್ಟೆನು. ಕರ್ತನು ನನಗೆ ಆಜ್ಞಾಪಿಸಿದ ಹಾಗೆ ಅವು ಅಲ್ಲಿಯೇ ಇರುತ್ತವೆ.

ಧರ್ಮೋಪದೇಶಕಾಂಡ 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी