ಜೆಕರ್ಯ 12:3

ಆ ದಿನದಲ್ಲಿ ನಾನು ಯೆರೂಸಲೇಮನ್ನು ಎಲ್ಲಾ ಜನರಿಗೆ ಭಾರವಾದ ಕಲ್ಲಾಗಿ ಮಾಡುತ್ತೇನೆ; ಅದನ್ನು ಎತ್ತುವವರೆಲ್ಲರು ಜಜ್ಜಲ್ಪಡುವರು; ಆದರೆ ಅದಕ್ಕೆ ವಿರೋಧವಾಗಿ ಭೂಮಿಯ ಜನಾಂಗಗಳೆಲ್ಲಾ ಒಟ್ಟುಗೂಡಿಕೊಳ್ಳುವವು.

ಸಂದರ್ಭದೊಂದಿಗೆ ಓದಿ · ಜೆಕರ್ಯ 12

1ಇಸ್ರಾಯೇಲಿನ ವಿಷಯವಾದ ಕರ್ತನ ವಾಕ್ಯದ ಭಾರವು ಆಕಾಶವನ್ನು ಹರಡಿಸು ವಾತನೂ ಭೂಮಿಯ ಅಸ್ತಿವಾರವನ್ನು ಹಾಕುವಾತನೂ ಮನುಷ್ಯನ ಆತ್ಮವನ್ನು ಅವನೊಳಗೆ ರೂಪಿಸುವಾತನೂ ಆದ ಕರ್ತನು ಹೇಳುವದೇನಂದರೆ--

2ಇಗೋ, ನಾನು ಯೆರೂಸಲೇಮನ್ನು ಸುತ್ತಲಿರುವ ಎಲ್ಲಾ ಜನರಿಗೆ ನಡುಗುವ ಪಾತ್ರೆಯಾಗಿ ಮಾಡುತ್ತೇನೆ; ಯೆರೂಸಲೇ ಮಿಗೂ ಯೆಹೂದಕ್ಕೂ ವಿರೋಧವಾಗಿ ಮುತ್ತಿಗೆ ಹಾಕುವ

3ಆ ದಿನದಲ್ಲಿ ನಾನು ಯೆರೂಸಲೇಮನ್ನು ಎಲ್ಲಾ ಜನರಿಗೆ ಭಾರವಾದ ಕಲ್ಲಾಗಿ ಮಾಡುತ್ತೇನೆ; ಅದನ್ನು ಎತ್ತುವವರೆಲ್ಲರು ಜಜ್ಜಲ್ಪಡುವರು; ಆದರೆ ಅದಕ್ಕೆ ವಿರೋಧವಾಗಿ ಭೂಮಿಯ ಜನಾಂಗಗಳೆಲ್ಲಾ ಒಟ್ಟುಗೂಡಿಕೊಳ್ಳುವವು.

4ಆ ದಿನದಲ್ಲಿ ಕರ್ತನು--ನಾನು ಕುದುರೆಗಳನ್ನೆಲ್ಲಾ ಬೆದರಿಕೆಯಿಂದಲೂ ಹತ್ತಿ ದವನನ್ನು ಹುಚ್ಚುತನದಿಂದಲೂ ಹೊಡೆಯುವೆನು; ಯೆಹೂದನ ಮನೆಯ ಮೇಲೆ ನನ್ನ ಕಣ್ಣುಗಳನ್ನು ತೆರೆಯುವೆನು; ಜನಗಳ ಕುದುರೆಗಳನ್ನೆಲ್ಲಾ ಕುರುಡುತನ ದಿಂದ ಹೊಡೆಯುವೆನು.

5ಆಗ ಯೆಹೂದದ ದೊರೆ ಗಳು ತಮ್ಮ ಹೃದಯದಲ್ಲಿ--ಯೆರೂಸಲೇಮಿನ ನಿವಾಸಿ ಗಳು ಅವರ ದೇವರಾದ ಸೈನ್ಯಗಳ ಕರ್ತನಲ್ಲಿ ನಮಗೆ ಬಲವಾಗಿದ್ದಾರೆಂದು ಅವರು ಅಂದುಕೊಳ್ಳುವರು.

ಜೆಕರ್ಯ 12 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी