ಇಗೋ, ಕರ್ತನು ನಿನ್ನನ್ನು ಬಲವಾದ ಬಂಧನದೊಂದಿಗೆ ಹಿಡಿದೇ ಹಿಡಿಯು ವನು.
15ಸೈನ್ಯಗಳ ಕರ್ತನಾದ ದೇವರು ಹೀಗೆ ನುಡಿದಿ ದ್ದಾನೆ--ಹೋಗು, ಅರಮನೆಯ ಉಗ್ರಾಣದವನಾದ ಶೆಬ್ನನೆಂಬ ಈ ಖಜಾಂಚಿ ಬಳಿಗೆ ಹೋಗಿ ಹೀಗೆ ಹೇಳು--
16ನಿನಗೆ ಇಲ್ಲಿ ಏನು ಕೆಲಸ? ಇಲ್ಲಿ ನಿನಗೆ ಯಾರಿದ್ದಾರೆ? ನೀನು ಉನ್ನತದಲ್ಲಿ ತನಗೆ ಸಮಾಧಿ ಯನ್ನು ತೋಡಿಸಿ, ಬಂಡೆಯಲ್ಲಿ ತನಗೆ ನಿವಾಸವನ್ನು ಕೆತ್ತಿಸುವವನ ಹಾಗೆ, ನಿನಗೆ ಇಲ್ಲಿ ಸಮಾಧಿಯನ್ನು ತೋಡಿಸಿದ್ದಿ ಅಲ್ಲವೆ?
17ಇಗೋ, ಕರ್ತನು ನಿನ್ನನ್ನು ಬಲವಾದ ಬಂಧನದೊಂದಿಗೆ ಹಿಡಿದೇ ಹಿಡಿಯು ವನು.
18ನಿನ್ನನ್ನು ಚೆಂಡಿನಂತೆ ಸುತ್ತಿಸುತ್ತಿ ತಿರುಗಿಸಿ ವಿಸ್ತಾರವಾದ ದೇಶಕ್ಕೆ ಬಿಸಾಡುವನು. ಅಲ್ಲೆ ನೀನು ಸಾಯುವಿ, ನಿನ್ನ ವೈಭವದ ರಥಗಳು ನಿನ್ನ ಧಣಿಯ ಮನೆಗೆ ಅವಮಾನವನ್ನುಂಟು ಮಾಡುವವು.
19ನಿನ್ನನ್ನು ನಿನ್ನ ಉದ್ಯೋಗದಿಂದ ತಳ್ಳಿಬಿಡುವೆನು. ನಿನ್ನ ಪದವಿಯಿಂದ ನಿನ್ನನ್ನು ಕೆಳಗೆ ಎಳೆದುಬಿಡುವೆನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ