ನೀವು ಇದ ರಲ್ಲಿ ತಪ್ಪು ಮಾಡದ ಹಾಗೆ ಜಾಗ್ರತೆಯಾಗಿರ್ರಿ; ಅರಸು ಗಳಿಗೆ ಕೇಡೂ ನಷ್ಟವೂ ಸಂಭವಿಸುವದು ಯಾಕೆ ಎಂದು ಬರೆದನು.
20ನದಿಯ ಆಚೆಯಲ್ಲಿರುವ ಎಲ್ಲಾ ಸ್ಥಳಗಳ ಮೇಲೆ ಆಳುತ್ತಾ ಇದ್ದ ಯೆರೂಸಲೇಮಿನ ಪರಾಕ್ರಮಶಾಲಿಗಳಾದ ಅರಸು ಗಳು ಇದ್ದರು; ಸುಂಕವೂ ಕಪ್ಪವೂ ತೆರಿಗೆಯೂ ಅವ ರಿಗೆ ಕೊಡಲ್ಪಟ್ಟವು ಎಂದು ಕಾಣಿಸಿತು.
21ಆದಕಾರಣ ಮತ್ತೊಂದು ಆಜ್ಞೆಯು ನನ್ನಿಂದ ಕೊಡಲ್ಪಡುವ ಮಟ್ಟಿಗೂ ಆ ಪಟ್ಟಣವನ್ನು ಕಟ್ಟದ ಹಾಗೆ ಆ ಮನುಷ್ಯ ರನ್ನು ನಿಲ್ಲಿಸಬೇಕೆಂದು ಆಜ್ಞಾಪಿಸಿರಿ.
22ನೀವು ಇದ ರಲ್ಲಿ ತಪ್ಪು ಮಾಡದ ಹಾಗೆ ಜಾಗ್ರತೆಯಾಗಿರ್ರಿ; ಅರಸು ಗಳಿಗೆ ಕೇಡೂ ನಷ್ಟವೂ ಸಂಭವಿಸುವದು ಯಾಕೆ ಎಂದು ಬರೆದನು.
23ಅರಸನಾದ ಆರ್ತಷಸ್ತನ ಪತ್ರಿಕೆಯ ಪ್ರತಿಯು ರೆಹೂಮನಿಗೂ ಲೇಖಕನಾದ ಶಿಂಷೈಗೂ ಇವರ ಜೊತೆ ಗಾರನ ಮುಂದೆಯೂ ಓದಿದ ತರುವಾಯ ಅವರು ಯೆರೂಸಲೇಮಿನಲ್ಲಿ ಇರುವ ಯೆಹೂದ್ಯರ ಬಳಿಗೆ ತ್ವರೆಯಾಗಿ ಹೋಗಿ ಒತ್ತಾಯದಿಂದ ಮತ್ತು ಬಲದಿಂದ ಅವರನ್ನು ತಡೆದರು.
24ಆಗ ಯೆರೂಸಲೇಮಿನಲ್ಲಿರುವ ದೇವರ ಆಲ ಯದ ಕೆಲಸವು ನಿಲ್ಲಿಸಲ್ಪಟ್ಟಿತು. ಪಾರಸಿಯರ ಅರಸ ನಾದ ದಾರ್ಯಾವೆಷನ ಆಳ್ವಿಕೆಯ ಎರಡನೇ ವರುಷದ ವರೆಗೆ ನಿಲ್ಲಿಸಲ್ಪಟ್ಟಿತು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ