ತನ್ನ ಗಂಡನಾದ ಊರೀಯನು ಸತ್ತನೆಂದು ಊರೀಯನ ಹೆಂಡತಿಯು ಕೇಳಿದಾಗ ಅವಳು ತನ್ನ ಗಂಡನಿಗೋಸ್ಕರ ಗೋಳಾಡಿದಳು.
24ಆಗ ಬಿಲ್ಲುಗಾರರು ಗೋಡೆಯ ಮೇಲಿನಿಂದ ನಿನ್ನ ಸೇವಕರ ಮೇಲೆ ಬಾಣಗಳನ್ನು ಎಸೆದಕಾರಣ ಅರಸನ ಸೇವಕರಲ್ಲಿ ಕೆಲವರು ಸತ್ತರು; ಇದಲ್ಲದೆ ನಿನ್ನ ಸೇವ ಕನಾದ ಊರೀಯನೆಂಬ ಹಿತ್ತಿಯನೂ ಸತ್ತನು ಅಂದನು.
25ಆಗ ದಾವೀದನು ಆ ದೂತನಿಗೆ--ನೀನು ಯೋವಾಬನಿಗೆ--ಈ ಕಾರ್ಯ ನಿನಗೆ ಮೆಚ್ಚಿಗೆ ಯಿಲ್ಲದ್ದಾಗಿ ಕಾಣಬಾರದು. ಯಾಕಂದರೆ ಕತ್ತಿಯು ಇವನನ್ನಾದರೂ ಸರಿ ಅವನನ್ನಾದರೂ ಸರಿ ತಿಂದು ಬಿಡುವದು. ನೀನು ಪಟ್ಟಣವನ್ನು ನಿರ್ಮೂಲಮಾಡುವ ಹಾಗೆ ಅದರ ಮೇಲೆ ನಿನ್ನ ಯುದ್ಧವು ಹೆಚ್ಚು ಬಲವಾಗಿರಲಿ ಎಂದು ಹೇಳಿ ಅವನನ್ನು ಬಲಪಡಿಸು ಅಂದನು.
26ತನ್ನ ಗಂಡನಾದ ಊರೀಯನು ಸತ್ತನೆಂದು ಊರೀಯನ ಹೆಂಡತಿಯು ಕೇಳಿದಾಗ ಅವಳು ತನ್ನ ಗಂಡನಿಗೋಸ್ಕರ ಗೋಳಾಡಿದಳು.
27ದುಃಖದ ದಿವ ಸಗಳು ತೀರಿದ ತರುವಾಯ ದಾವೀದನು ಅವಳನ್ನು ತನ್ನ ಮನೆಗೆ ಕರೇಕಳುಹಿಸಿದನು; ಅವಳು ಅವನಿಗೆ ಹೆಂಡತಿಯಾಗಿ ಒಬ್ಬ ಮಗನನ್ನು ಹೆತ್ತಳು; ಆದರೆ ದಾವೀದನು ಮಾಡಿದ ಈ ಕಾರ್ಯವು ಕರ್ತನ ದೃಷ್ಟಿಗೆ ಕೆಟ್ಟದ್ದಾಗಿತ್ತು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ