ಎಸ್ತೇರಳು 9:4

ಮೊರ್ದೆಕೈ ಅರಮನೆಯಲ್ಲಿ ದೊಡ್ಡವನಾಗಿದ್ದನು. ಅವನ ಕೀರ್ತಿಯು ಸಮಸ್ತ ಪ್ರಾಂತ್ಯಗಳ ಮೇಲೆ ವ್ಯಾಪಿಸಿತು. ಈ ಮೊರ್ದೆಕೈ ಅಧಿಕಾಧಿಕವಾಗಿ ದೊಡ್ಡವನಾದನು.

ಸಂದರ್ಭದೊಂದಿಗೆ ಓದಿ · ಎಸ್ತೇರಳು 9

2ಅದೇ ದಿವಸದಲ್ಲಿ ಯೆಹೂದ್ಯರು ಅರಸನಾದ ಅಹ ಷ್ವೇರೋಷನ ಸಮಸ್ತ ಪ್ರಾಂತ್ಯಗಳಲ್ಲಿರುವ ತಮ್ಮ ತಮ್ಮ ಪಟ್ಟಣಗಳಲ್ಲಿ ತಮ್ಮನ್ನು ಕೊಲ್ಲಲು ಹುಡುಕುವವರ ಮೇಲೆ ಕೈ ಹಾಕಲು ಕೂಡಿಕೊಂಡರು. ಆಗ ಅವರ ಭಯವು ಸಮಸ್ತ ಜನರ ಮೇಲೆ ಬಿದ್ದದ್ದರಿಂದ ಅವರ ಮುಂದೆ ನಿಲ್ಲುವವನು ಒಬ್ಬನೂ ಇರಲಿಲ್ಲ.

3ಇದಲ್ಲದೆ ಪ್ರಾಂತ್ಯಗಳ ಅಧಿಕಾರಿಗಳೂ ಪ್ರತಿನಿಧಿಗಳೂ ಅಧಿಪತಿ ಗಳೂ ಅರಸನ ಕೆಲಸದವರೂ ಯೆಹೂದ್ಯರಿಗೆ ಸಹಾಯ ಮಾಡಿದರು. ಯಾಕಂದರೆ ಮೊರ್ದೆ ಕೈಯ ಭಯ ಅವರಿಗೆ ಇದ್ದಿತು.

4ಮೊರ್ದೆಕೈ ಅರಮನೆಯಲ್ಲಿ ದೊಡ್ಡವನಾಗಿದ್ದನು. ಅವನ ಕೀರ್ತಿಯು ಸಮಸ್ತ ಪ್ರಾಂತ್ಯಗಳ ಮೇಲೆ ವ್ಯಾಪಿಸಿತು. ಈ ಮೊರ್ದೆಕೈ ಅಧಿಕಾಧಿಕವಾಗಿ ದೊಡ್ಡವನಾದನು.

5ಹೀಗೆಯೇ ಯೆಹೂದ್ಯರು ಕತ್ತೀ ಹೊಡೆತದಿಂದಲೂ ಕೊಲೆಯಿಂದಲೂ ನಾಶದಿಂದಲೂ ತಮ್ಮ ಶತ್ರುಗಳೆಲ್ಲರನ್ನು ಹೊಡೆದು ತಮ್ಮನ್ನು ಹಗೆಮಾಡುವವರಿಗೆ ತಮ್ಮ ಇಷ್ಟ ಬಂದ ಹಾಗೆ ಮಾಡಿದರು.

6ಶೂಷನಿನ ಅರಮನೆಯಲ್ಲಿ ಯೆಹೂದ್ಯರು ಐನೂರು ಮಂದಿಯನ್ನು ಕೊಂದರು.

ಎಸ್ತೇರಳು 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी