ಅವನ ಕೈಗಳು ಅವನ ಅಣ್ಣನಾದ ಏಸಾವನ ಕೈಗಳಂತೆ ರೋಮಗಳುಳ್ಳವುಗಳಾಗಿದ್ದದರಿಂದ ಅವನು ಯಾರೆಂದು ತಿಳಿಯದೆ ಅವನನ್ನು ಆಶೀರ್ವದಿಸಿದನು.
21ಆಗ ಇಸಾಕನುನನ್ನ ಮಗನೇ, ನೀನೇ ನನ್ನ ಮಗನಾದ ಏಸಾವನು ಹೌದೋ ಅಲ್ಲವೋ ಎಂದು ನಾನು ನಿನ್ನನ್ನು ಮುಟ್ಟಿ ನೋಡುವಂತೆ ಹತ್ತಿರ ಬಾ ಅಂದನು.
22ಆಗ ಯಾಕೋಬನು ತನ್ನ ತಂದೆಯಾದ ಇಸಾಕನ ಹತ್ತಿರ ಬಂದನು. ಇಸಾಕನು ಅವನನ್ನು ಮುಟ್ಟಿ--ಸ್ವರವು ಯಾಕೋಬನ ಸ್ವರವಾಗಿದೆ, ಆದರೆ ಕೈಗಳು ಏಸಾವನ ಕೈಗಳು ಎಂದು ಹೇಳಿದನು.
23ಅವನ ಕೈಗಳು ಅವನ ಅಣ್ಣನಾದ ಏಸಾವನ ಕೈಗಳಂತೆ ರೋಮಗಳುಳ್ಳವುಗಳಾಗಿದ್ದದರಿಂದ ಅವನು ಯಾರೆಂದು ತಿಳಿಯದೆ ಅವನನ್ನು ಆಶೀರ್ವದಿಸಿದನು.
24ಅವನು--ನೀನು ನನ್ನ ಮಗನಾದ ಏಸಾವನೋ ಅಂದಾಗ ಅವನು--ನಾನೇ ಅಂದನು.
25ಆಗ ಅವನು--ಅದನ್ನು ನನ್ನ ಹತ್ತಿರ ತಕ್ಕೊಂಡು ಬಾ, ನನ್ನ ಪ್ರಾಣವು ನಿನ್ನನ್ನು ಆಶೀರ್ವದಿಸುವ ಹಾಗೆ ನನ್ನ ಮಗನ ಬೇಟೆಯ ಮಾಂಸವನ್ನು ಊಟ ಮಾಡುವೆನು ಅಂದನು; ಆಗ ಯಾಕೋಬನು ಅದನ್ನು ಹತ್ತಿರ ತಕ್ಕೊಂಡು ಬಂದಾಗ ಅವನು ಊಟಮಾಡಿ ದ್ರಾಕ್ಷಾರಸವನ್ನು ತಂದಾಗ ಅವನು ಕುಡಿದನು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ