ನೀನು ನೇಮಿಸಿದ ಕ್ರಯಗಳೆಲ್ಲಾ ಪರಿಶುದ್ಧ ಶೇಕೆಲಿನ ಮೇರೆಗೆ ಇರಬೇಕು; ಶೇಕೆಲಿಗೆ ಇಪ್ಪತ್ತು ಗೇರಗಳಿರಬೇಕು.
23ಯಾಜಕನು ಅವನಿಗೆ ನೀನು ನೇಮಿಸಿದ ಕ್ರಯದ ಹಣವನ್ನು ಜೂಬಿಲಿ ಸಂವತ್ಸರದ ವರೆಗೂ ಎಣಿಸಬೇಕು; ಅವರು ಆ ದಿವಸದಲ್ಲಿ ನೀನು ಕಟ್ಟಿದ ಕ್ರಯವನ್ನು ಕರ್ತನಿಗೆ ಪರಿಶುದ್ಧವಾದದ್ದಾಗಿ ಅವನು ಕೊಡಬೇಕು.
24ಜೂಬಿಲಿ ಸಂವತ್ಸರದಲ್ಲಿ ಆ ಹೊಲದ ಭೂಮಿಯ ಸ್ವಾಸ್ತ್ಯವುಂಟಾದವನಿಗೆ ಅಂದರೆ ಇವನು ಯಾವನಿಂದ ಕೊಂಡುಕೊಂಡನೋ ಅವನಿಗೆ ತಿರುಗಿ ಹಿಂದಕ್ಕೆ ಕೊಡಬೇಕು.
25ನೀನು ನೇಮಿಸಿದ ಕ್ರಯಗಳೆಲ್ಲಾ ಪರಿಶುದ್ಧ ಶೇಕೆಲಿನ ಮೇರೆಗೆ ಇರಬೇಕು; ಶೇಕೆಲಿಗೆ ಇಪ್ಪತ್ತು ಗೇರಗಳಿರಬೇಕು.
26ಪಶುಗಳಲ್ಲಿ ಮೊದಲಾಗಿ ಹುಟ್ಟಿದ್ದು ಮಾತ್ರವೇ ಕರ್ತನ ಚೊಚ್ಚಲಾಗಿರುವದು. ಅದನ್ನು ಯಾವನೂ ಪ್ರತಿಷ್ಠೆಮಾಡಲಾರನು. ಅದು ಎತ್ತಾಗಲಿ ಇಲ್ಲವೆ ಕುರಿ ಯಾಗಲಿ ಅದು ಕರ್ತನದೇ.
27ಆದರೆ ಅದು ಅಶುದ್ಧ ಪಶುವಾಗಿದ್ದರೆ ನೀನು ಕ್ರಯ ಕಟ್ಟಿದ ಪ್ರಕಾರ ಅದಕ್ಕೆ ಹೆಚ್ಚಾಗಿ ಐದನೇ ಪಾಲನ್ನು ಕೊಟ್ಟು ಅವನು ಅದನ್ನು ವಿಮೋಚಿಸಬೇಕು; ವಿಮೋಚಿಸದಿದ್ದರೆ ಅದನ್ನು ನೀನು ಕ್ರಯ ಕಟ್ಟಿದ ಪ್ರಕಾರ ಮಾರಬೇಕು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ