೧ ಅರಸುಗಳು 11:23

ಇದಲ್ಲದೆ ದೇವರು ಮತ್ತೊಬ್ಬ ಶತ್ರುವನ್ನು ಅವನ ಮೇಲೆ ಎಬ್ಬಿಸಿದನು. ಅವನು ಯಾರಂದರೆ ಚೋಬದ ಅರಸನಾದ ತನ್ನ ಯಜಮಾನನಾಗಿರುವ ಹದದೇಜರ ನನ್ನು ಬಿಟ್ಟು ಓಡಿಹೋದ ಎಲ್ಯದಾವನ ಮಗನಾದ ರೆಜೋನನು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 11

21ಆದರೆ ದಾವೀದನು ತನ್ನ ಪಿತೃಗಳ ಸಂಗಡ ಮಲಗಿದ್ದಾನೆಂದೂ ಸೈನ್ಯಾಧಿಪತಿಯಾದ ಯೋವಾಬನು ಸತ್ತುಹೋದನೆಂದೂ ಹದದನು ಐಗುಪ್ತದಲ್ಲಿ ಕೇಳಿ ಫರೋಹನಿಗೆ--ನಾನು ನನ್ನ ದೇಶಕ್ಕೆ ಹೋಗುವ ಹಾಗೆ ನನ್ನನ್ನು ಕಳುಹಿಸು ಅಂದನು.

22ಫರೋಹನು ಅವನಿಗೆ -- ಯಾಕೆ? ಇಗೋ, ನೀನು ನಿನ್ನ ದೇಶಕ್ಕೆ ಹೋಗಬೇಕೆಂಬುವ ಹಾಗೆ ನೀನು ನನ್ನ ಸಂಗಡ ಇರುವಾಗ ನಿನಗೆ ಏನು ಕೊರತೆಯಾಯಿತು ಅಂದಾಗ ಅವನು--ಏನೂ ಇಲ್ಲ; ಆದರೆ ಹೇಗಾದರೂ ನಾನು ಅಲ್ಲಿಗೆ ಹೋಗುತ್ತೇನೆ ಅಂದನು.

23ಇದಲ್ಲದೆ ದೇವರು ಮತ್ತೊಬ್ಬ ಶತ್ರುವನ್ನು ಅವನ ಮೇಲೆ ಎಬ್ಬಿಸಿದನು. ಅವನು ಯಾರಂದರೆ ಚೋಬದ ಅರಸನಾದ ತನ್ನ ಯಜಮಾನನಾಗಿರುವ ಹದದೇಜರ ನನ್ನು ಬಿಟ್ಟು ಓಡಿಹೋದ ಎಲ್ಯದಾವನ ಮಗನಾದ ರೆಜೋನನು.

24ದಾವೀದನು ಚೋಬದ ಜನರನ್ನು ಸಂಹರಿಸುವಾಗ ಇವನು ಮನುಷ್ಯರನ್ನು ತನ್ನ ಬಳಿಯಲ್ಲಿ ಕೂಡಿಸಿಕೊಂಡು ಒಂದು ಗುಂಪಿಗೆ ಅಧಿಪತಿಯಾದನು. ಇವನು ಅವರ ಸಂಗಡ ದಮಸ್ಕಕ್ಕೆ ಹೋಗಿ ಅಲ್ಲಿ ವಾಸಿಸಿ ದಮಸ್ಕದಲ್ಲಿ ಆಳುತ್ತಾ ಇದ್ದನು.

25ಹದದನು ಮಾಡಿದ ಕೇಡು ಹೊರತಾಗಿ ಇವನು ಸೊಲೊ ಮೋನನ ದಿವಸಗಳಲ್ಲೆಲ್ಲಾ ಇಸ್ರಾಯೇಲ್ಯರಿಗೆ ಶತ್ರು ವಾಗಿದ್ದನು. ಅವನು ಇಸ್ರಾಯೇಲ್ಯರನ್ನು ಹಗೆ ಮಾಡಿ ಅರಾಮ್‌ ದೇಶವನ್ನು ಆಳುತ್ತಾ ಇದ್ದನು.

೧ ಅರಸುಗಳು 11 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी