ಆದಿಕಾಂಡ 39:3

ಕರ್ತನು ಅವನ ಸಂಗಡ ಇದ್ದಾನೆಂದೂ ಅವನು ಮಾಡಿದ್ದನ್ನೆಲ್ಲಾ ಕರ್ತನು ಅವನ ಕೈಯಿಂದ ಅಭಿವೃದ್ಧಿಮಾಡಿದನೆಂದೂ ಅವನ ಯಜಮಾನನು ನೋಡಿದನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 39

1ಯೋಸೇಫನನ್ನು ಐಗುಪ್ತಕ್ಕೆ ತಕ್ಕೊಂಡು ಹೋದರು. ಅವನನ್ನು ಅಲ್ಲಿಗೆ ತಕ್ಕೊಂಡು ಹೋದ ಇಷ್ಮಾಯೇಲ್ಯರ ಕೈಯಿಂದ ಐಗುಪ್ತದವನೂ ಫರೋಹನ ಉದ್ಯೋಗಸ್ಥನೂ ಮೈಗಾವಲಿನವನೂ ಅಧಿಪತಿಯೂ ಆದ ಪೋಟೀಫರನು ಅವನನ್ನು ಕೊಂಡುಕೊಂಡನು.

2ಕರ್ತನು ಯೋಸೇಫನ ಸಂಗಡ ಇದದ್ದರಿಂದ ಅವನು ಏಳಿಗೆಯಾಗಿ ಐಗುಪ್ತದವನಾದ ತನ್ನ ಯಜಮಾನನ ಮನೆಯಲ್ಲಿ ಇದ್ದನು.

3ಕರ್ತನು ಅವನ ಸಂಗಡ ಇದ್ದಾನೆಂದೂ ಅವನು ಮಾಡಿದ್ದನ್ನೆಲ್ಲಾ ಕರ್ತನು ಅವನ ಕೈಯಿಂದ ಅಭಿವೃದ್ಧಿಮಾಡಿದನೆಂದೂ ಅವನ ಯಜಮಾನನು ನೋಡಿದನು.

4ಆದದರಿಂದ ಯೋಸೇಫನು ಅವನ ದೃಷ್ಟಿಯಲ್ಲಿ ಕೃಪೆಹೊಂದಿ ಅವನ ಸೇವೆಮಾಡಿದನು. ಪೋಟೀಫರನು ಅವನನ್ನು ತನ್ನ ಮನೆಯ ಮೇಲೆ ಮೇಲ್ವಿಚಾರಕನನ್ನಾಗಿ ಮಾಡಿ ತನಗಿದ್ದದ್ದನ್ನೆಲ್ಲಾ ಅವನ ಕೈಗೆ ಒಪ್ಪಿಸಿದನು.

5ಅವನನ್ನು ಮನೆಯಲ್ಲಿಯೂ ತನಗಿದ್ದ ಎಲ್ಲಾದರ ಮೇಲೆಯೂ ಮೇಲ್ವಿಚಾರಕನನ್ನಾಗಿ ಮಾಡಿದಂದಿನಿಂದ ಕರ್ತನು ಆ ಐಗುಪ್ತದವನ ಮನೆಯನ್ನು ಯೋಸೇಫನ ನಿಮಿತ್ತ ವಾಗಿ ಆಶೀರ್ವದಿಸಿದನು. ಮನೆಯಲ್ಲಿಯೂ ಹೊಲ ದಲ್ಲಿಯೂ (ಅವನಿಗಿದ್ದ) ಎಲ್ಲಾದರ ಮೇಲೆಯೂ ಕರ್ತನ ಆಶೀರ್ವಾದವಿತ್ತು.

ಆದಿಕಾಂಡ 39 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी