ಯೆರೆಮಿಯ 12:15

ನಾನು ಅವರನ್ನು ಕಿತ್ತುಹಾಕಿದ ಮೇಲೆ ಆಗುವದೇ ನಂದರೆ--ನಾನು ಹಿಂತಿರುಗಿ ಅವರನ್ನು ಕರುಣಿಸುವೆನು; ತಮ್ಮ ತಮ್ಮ ಸ್ವಾಸ್ತ್ಯಕ್ಕೂ ತಮ್ಮ ತಮ್ಮ ದೇಶಕ್ಕೂ ಅವರನ್ನು ತಿರುಗಿ ಬರಮಾಡುವೆನು.

ಸಂದರ್ಭದೊಂದಿಗೆ ಓದಿ · ಯೆರೆಮಿಯ 12

13ಗೋಧಿಯನ್ನು ಬಿತ್ತಿ, ಮುಳ್ಳು ಗಳನ್ನು ಕೊಯ್ಯುವರು; ಕಷ್ಟಪಟ್ಟರೂ ಪ್ರಯೋಜನ ವಾಗುವದಿಲ್ಲ; ಕರ್ತನ ಕೋಪದ ಉರಿಯಿಂದ ನಿಮ್ಮ ಬೆಳೆಯ ವಿಷಯವಾಗಿ ನಾಚಿಕೆಪಡುವಿರಿ.

14ನನ್ನ ಕೆಟ್ಟ ನೆರೆಯವರೆಲ್ಲರಿಗೆ ನನ್ನ ಜನರಾದ ಇಸ್ರಾಯೇಲ್ಯರಿಗೆ ಸ್ವಾಧೀನಮಾಡಿಕೊಳ್ಳುವದಕ್ಕೆ ನಾನು ಕೊಟ್ಟ ಸ್ವಾಸ್ತ್ಯವನ್ನು ಮುಟ್ಟುವವರಿಗೆ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಅವರನ್ನು ಅವರ ಭೂಮಿಯೊಳಗಿಂದ ಕಿತ್ತುಹಾಕುವೆನು; ಯೆಹೂದನ ಮನೆತನದವರನ್ನು ಅವರೊಳಗಿಂದ ಕಿತ್ತುಹಾಕುವೆನು.

15ನಾನು ಅವರನ್ನು ಕಿತ್ತುಹಾಕಿದ ಮೇಲೆ ಆಗುವದೇ ನಂದರೆ--ನಾನು ಹಿಂತಿರುಗಿ ಅವರನ್ನು ಕರುಣಿಸುವೆನು; ತಮ್ಮ ತಮ್ಮ ಸ್ವಾಸ್ತ್ಯಕ್ಕೂ ತಮ್ಮ ತಮ್ಮ ದೇಶಕ್ಕೂ ಅವರನ್ನು ತಿರುಗಿ ಬರಮಾಡುವೆನು.

16ಬಾಳನ ಆಣೆ ಇಟ್ಟು ಕೊಳ್ಳುವದಕ್ಕೆ ಅವರು ನನ್ನ ಜನಕ್ಕೆ ಬೋಧಿಸಿದ ಪ್ರಕಾರ ಅವರು ಕರ್ತನ ಜೀವದಾಣೆ ಎಂದು ಹೇಳಿ ನನ್ನ ಹೆಸರಿನ ಆಣೆ ಇಟ್ಟುಕೊಳ್ಳುವದಕ್ಕೆ ನನ್ನ ಜನರ ಮಾರ್ಗ ಗಳನ್ನು ಜಾಗ್ರತೆಯಾಗಿ ಕಲಿತುಕೊಂಡರೆ ಆಗ ಅವರು ನನ್ನ ಜನರ ಮಧ್ಯದಲ್ಲಿ ಕಟ್ಟಲ್ಪಡುವರು.

17ಆದರೆ ಅವರು ಕೇಳದೆಹೋದರೆ, ಆ ಜನಾಂಗವನ್ನು ಸಂಪೂ ರ್ಣವಾಗಿ ಕಿತ್ತು ನಾಶಮಾಡುವೆನು ಎಂದು ಕರ್ತನು ಅನ್ನುತ್ತಾನೆ.

ಯೆರೆಮಿಯ 12 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी