೨ ಕೊರಿಂಥದವರಿಗೆ 7:9

ಆದರೂ ನಿಮಗೆ ದುಃಖವಾಯಿತೆಂದು ನಾನು ಸಂತೋಷಪಡದೆ ನೀವು ದುಃಖಪಟ್ಟು ಮಾನಸಾಂತರ ಹೊಂದಿದ್ದಕ್ಕಾಗಿ ಈಗ ಸಂತೋಷ ಪಡುತ್ತೇನೆ; ಯಾಕಂದರೆ ನೀವು ದೇವರ ಚಿತ್ತಾನುಸಾರ ವಾಗಿ ದುಃಖಿಸಿದ್ದರಿಂದ ನಮ್ಮಿಂದ ಯಾವದರಲ್ಲಿಯೂ ನೀವು ನಷ್ಟಪಡಲಿಲ್ಲವಲ್ಲಾ.

ಸಂದರ್ಭದೊಂದಿಗೆ ಓದಿ · ೨ ಕೊರಿಂಥದವರಿಗೆ 7

7ಅವನ ಬರುವಿಕೆಯಿಂದಮಾತ್ರವಲ್ಲದೆ ಅವನು ನಿಮ್ಮ ಯಥಾರ್ಥವಾದ ಹಂಬಲ, ನಿಮ್ಮ ಗೋಳಾಟ, ನನ್ನ ಕಡೆಗಿರುವ ನಿಮ್ಮ ಆಸಕ್ತಿಯ ಮನಸ್ಸು ಮತ್ತು ತಾನು ನಿಮ್ಮಲ್ಲಿ ಹೊಂದಿದ ಆದರಣೆ ಇವುಗಳನ್ನು ನಮಗೆ ತಿಳಿಸಿದಾಗ ನಾನು ಹೆಚ್ಚಾಗಿ ಸಂತೋಷಪಟ್ಟೆನು.

8ನಾನು ಪತ್ರದಿಂದ ನಿಮ್ಮನ್ನು ದುಃಖಪಡಿಸಿದಕ್ಕೆ ನನಗೆ ವ್ಯಸನವಾದರೂ ನಾನು ಪಶ್ಚಾತ್ತಾಪಪಡು ವದಿಲ್ಲ, ಯಾಕಂದರೆ ಆ ಪತ್ರಿಕೆಯು ನಿಮ್ಮನ್ನು ದುಃಖ ಪಡಿಸಿದಾಗ್ಯೂ ಅದು ಸ್ವಲ್ಪ ಕಾಲಕ್ಕೆ ಎಂದು ನಾನು ತಿಳಿಯುತ್ತೇನೆ.

9ಆದರೂ ನಿಮಗೆ ದುಃಖವಾಯಿತೆಂದು ನಾನು ಸಂತೋಷಪಡದೆ ನೀವು ದುಃಖಪಟ್ಟು ಮಾನಸಾಂತರ ಹೊಂದಿದ್ದಕ್ಕಾಗಿ ಈಗ ಸಂತೋಷ ಪಡುತ್ತೇನೆ; ಯಾಕಂದರೆ ನೀವು ದೇವರ ಚಿತ್ತಾನುಸಾರ ವಾಗಿ ದುಃಖಿಸಿದ್ದರಿಂದ ನಮ್ಮಿಂದ ಯಾವದರಲ್ಲಿಯೂ ನೀವು ನಷ್ಟಪಡಲಿಲ್ಲವಲ್ಲಾ.

10ದೇವರ ಚಿತ್ತಾನುಸಾರ ವಾಗಿರುವ ದುಃಖವು ರಕ್ಷಣೆಗಾಗಿ ಮಾನಸಾಂತರ ವನ್ನುಂಟು ಮಾಡುತ್ತದೆ. ಮಾನಸಾಂತರದಲ್ಲಿ ಪಶ್ಚಾತ್ತಾಪಕ್ಕೆ ಅಸ್ಪದವಿಲ್ಲ; ಆದರೆ ಲೋಕಸಂಬಂಧ ವಾದ ದುಃಖವು ಮರಣವನ್ನುಂಟುಮಾಡುತ್ತದೆ.

11ಯಾಕಂದರೆ ದೇವರ ಚಿತ್ತಾನುಸಾರವಾದ ಈ ದುಃಖವು ನಿಮ್ಮಲ್ಲಿ ಎಂಥ ಎಚ್ಚರಿಕೆಯನ್ನೂ ಎಂಥ ನಿರ್ದೋಷತ್ವವನ್ನೂ ಎಂಥ ರೋಷವನ್ನೂ ಎಂಥ ಭಯವನ್ನೂ ಎಂಥ ಅಧಿಕವಾದ ಹಂಬಲವನ್ನೂ ಎಂಥ ಆಸಕ್ತಿಯನ್ನೂ ಎಂಥ ಪ್ರತಿಕಾರವನ್ನೂ ಹುಟ್ಟಿಸಿತೆಂದು ನೋಡಿರಿ. ಇದರಲ್ಲಿ ನೀವೆಲ್ಲಾ ನಿರ್ದೋಷಿಗಳೆಂದು ತೋರಿಸಿಕೊಂ

೨ ಕೊರಿಂಥದವರಿಗೆ 7 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी