ಯೆರೆಮಿಯ 15:14

ನಿನ್ನನ್ನು ನಿನಗೆ ತಿಳಿಯದ ದೇಶದಲ್ಲಿ ನಿನ್ನ ಶತ್ರುಗ ಳೊಂದಿಗೆ ಹಾದುಹೋಗುವಂತೆ ಮಾಡುವೆನು. ಯಾಕಂದರೆ ನನ್ನ ಕೋಪದಲ್ಲಿ ಬೆಂಕಿ ಹತ್ತಿದೆ, ಅದು ನಿಮ್ಮ ಮೇಲೆ ಉರಿಯುವದು.

ಸಂದರ್ಭದೊಂದಿಗೆ ಓದಿ · ಯೆರೆಮಿಯ 15

12ಕಬ್ಬಿ ಣವು ಉತ್ತರದ ಕಬ್ಬಿಣವನ್ನೂ ಉಕ್ಕನ್ನೂ ಮುರಿಯ ಬಲ್ಲದೇ?

13ನಿನ್ನ ಆಸ್ತಿಯನ್ನೂ ಬೊಕ್ಕಸಗಳನ್ನೂ ಎಲ್ಲಾ ಪ್ರಾಂತ್ಯಗಳಲ್ಲಿ ನಿನ್ನ ಎಲ್ಲಾ ಪಾಪಗಳ ನಿಮಿತ್ತ ಕ್ರಯವಿಲ್ಲದೆ ಕೊಳ್ಳೆಯಾಗಿ ಕೊಟ್ಟುಬಿಡುವೆನು.

14ನಿನ್ನನ್ನು ನಿನಗೆ ತಿಳಿಯದ ದೇಶದಲ್ಲಿ ನಿನ್ನ ಶತ್ರುಗ ಳೊಂದಿಗೆ ಹಾದುಹೋಗುವಂತೆ ಮಾಡುವೆನು. ಯಾಕಂದರೆ ನನ್ನ ಕೋಪದಲ್ಲಿ ಬೆಂಕಿ ಹತ್ತಿದೆ, ಅದು ನಿಮ್ಮ ಮೇಲೆ ಉರಿಯುವದು.

15ಓ ಕರ್ತನೇ, ನೀನೇ ಬಲ್ಲೆ, ನನ್ನನ್ನು ಜ್ಞಾಪಕ ಮಾಡಿ ವಿಚಾರಿಸಿ ನನ್ನನ್ನು ಹಿಂಸಿಸುವವರಿಗೆ ನನಗೋ ಸ್ಕರ ಮುಯ್ಯಿಗೆ ಮುಯ್ಯಿ ತೀರಿಸು; ನಿನ್ನ ದೀರ್ಘ ಶಾಂತಿಯಲ್ಲಿ ನನ್ನನ್ನು ತೆಗೆದುಬಿಡಬೇಡ; ನಿನ್ನ ನಿಮಿತ್ತ ನಾನು ಗದರಿಸಲ್ಪಡುವೆನೆಂದು ತಿಳಿದುಕೋ.

16ನಿನ್ನ ವಾಕ್ಯಗಳು ಸಿಕ್ಕಿದವು, ಅವುಗಳನ್ನು ತಿಂದೆನು. ನಿನ್ನ ವಾಕ್ಯವು ನನ್ನ ಹೃದಯಕ್ಕೆ ಉಲ್ಲಾಸವೂ ಸಂತೋಷವೂ ಆಗಿತ್ತು; ಓ ಸೈನ್ಯಗಳ ದೇವರಾದ ಕರ್ತನೇ, ನಿನ್ನ ಹೆಸರಿನಿಂದ ಕರೆಯಲ್ಪಟ್ಟಿದ್ದೇನೆ.

ಯೆರೆಮಿಯ 15 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी