೨ ಅರಸುಗಳು 2:16

ಇದ ಲ್ಲದೆ ಅವರು ಅವನಿಗೆ--ಇಗೋ, ನಿನ್ನ ಸೇವಕರ ಸಂಗಡ ಐವತ್ತು ಮಂದಿ ಬಲಿಷ್ಠರಾದವರಿದ್ದಾರೆ; ಅವರು ಹೋಗಿ ನಿನ್ನ ಯಜಮಾನನನ್ನು ಹುಡುಕಲು ಅಪ್ಪಣೆ ಯಾಗಲಿ, ಒಂದು ವೇಳೆ ಕರ್ತನ ಆತ್ಮನು ಅವನನ್ನು ಎತ್ತಿಕೊಂಡು ಹೋಗಿ ಬೆಟ್ಟದ ಮೇಲಾದರೂ ತಗ್ಗಿನ ಲ್ಲಾದರೂ ಹಾಕಿರಬಹುದು ಅಂದರು.

ಸಂದರ್ಭದೊಂದಿಗೆ ಓದಿ · ೨ ಅರಸುಗಳು 2

14ಎಲೀಯನಿಂದ ಬಿದ್ದ ಹೊದಿಕೆಯನ್ನು ತಕ್ಕೊಂಡು ನೀರನ್ನು ಹೊಡೆದು--ಎಲೀಯನ ದೇವರಾದ ಕರ್ತನು ಎಲ್ಲಿದ್ದಾನೆ ಅಂದನು. ಅವನು ಹಾಗೆ ನೀರನ್ನು ಹೊಡೆದ ತರುವಾಯ ಅದು ಎರಡು ಭಾಗವಾದದ್ದರಿಂದ ಎಲೀ ಷನು ದಾಟಿಹೋದನು.

15ಯೆರಿಕೋವಿನ ಬಳಿಯಲ್ಲಿ ಎದುರಾಗಿದ್ದ ಪ್ರವಾದಿಗಳ ಮಕ್ಕಳು ಅವನನ್ನು ಕಂಡಾಗ--ಎಲೀಯನ ಆತ್ಮನು ಎಲೀಷನ ಮೇಲೆ ನಿಂತಿರುವನು ಎಂದು ಹೇಳಿ ಅವನನ್ನು ಎದುರುಗೊಂಡು ಅವನಿಗೆ ಸಾಷ್ಟಾಂಗನಮಸ್ಕಾರಮಾಡಿದರು.

16ಇದ ಲ್ಲದೆ ಅವರು ಅವನಿಗೆ--ಇಗೋ, ನಿನ್ನ ಸೇವಕರ ಸಂಗಡ ಐವತ್ತು ಮಂದಿ ಬಲಿಷ್ಠರಾದವರಿದ್ದಾರೆ; ಅವರು ಹೋಗಿ ನಿನ್ನ ಯಜಮಾನನನ್ನು ಹುಡುಕಲು ಅಪ್ಪಣೆ ಯಾಗಲಿ, ಒಂದು ವೇಳೆ ಕರ್ತನ ಆತ್ಮನು ಅವನನ್ನು ಎತ್ತಿಕೊಂಡು ಹೋಗಿ ಬೆಟ್ಟದ ಮೇಲಾದರೂ ತಗ್ಗಿನ ಲ್ಲಾದರೂ ಹಾಕಿರಬಹುದು ಅಂದರು.

17ಅವನುಕಳುಹಿಸಬೇಡಿರಿ ಅಂದನು. ಆದರೆ ಅವನು ನಾಚಿಕೆ ಪಡುವ ವರೆಗೂ ಅವನನ್ನು ಬಲವಂತಮಾಡಿದ್ದರಿಂದ ಅವನು--ಕಳುಹಿಸಿರಿ ಅಂದನು. ಅವರು ಐವತ್ತು ಮಂದಿಯನ್ನು ಕಳುಹಿಸಿದರು. ಇವರು ಮೂರು ದಿವಸ ಹುಡುಕಿದರೂ ಅವನನ್ನು ಕಾಣದೆ ಹೋದರು.

18ಅವನು ಇನ್ನೂ ಯೆರಿಕೋವಿನಲ್ಲಿದ್ದಾಗ ಅವರು ತಿರುಗಿ ಅವನ ಬಳಿಗೆ ಬಂದರು. ಆಗ ಅವನು ಇವ ರಿಗೆ--ಹೋಗಬೇಡಿರೆಂದು ನಾನು ನಿಮಗೆ ಹೇಳ ಲಿಲ್ಲವೋ ಅಂದನು.

೨ ಅರಸುಗಳು 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी