೧ ಅರಸುಗಳು 1:7

ಅಬ್ಷಾಲೋಮನ ತರು ವಾಯ ಅವನ ತಾಯಿ ಅವನನ್ನು ಹೆತ್ತಳು. ಅವನು ಚೆರೂಯಳ ಮಗನಾದ ಯೋವಾಬನ ಸಂಗಡಲೂ ಯಾಜಕನಾದ ಎಬ್ಯಾತಾರನ ಸಂಗಡಲೂ ಮಾತನಾ ಡಿದನು; ಅವರು ಅದೋನೀಯನನ್ನು ಹಿಂಬಾಲಿಸಿ ಅವನಿಗೆ ಸಹಾಯಕರಾಗಿದ್ದರು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 1

5ಆಗ ಹಗ್ಗೀತಳ ಮಗನಾದ ಅದೋನೀಯನು ತನ್ನನ್ನು ಹೆಚ್ಚಿಸಿಕೊಂಡು--ನಾನೇ ಅರಸನಾಗಿರಬೇಕು ಅಂದುಕೊಂಡು ತನಗೋಸ್ಕರ ರಥಗಳನ್ನೂ ರಾಹುತ ರನ್ನೂ ತನ್ನ ಮುಂದೆ ಓಡುವದಕ್ಕೆ ಐವತ್ತು ಮಂದಿ ಮನುಷ್ಯರನ್ನೂ ಸಿದ್ಧಮಾಡಿದನು.

6ಅವನ ತಂದೆಯು ಎಂದಾದರೂ--ನೀನು ಯಾಕೆ ಹೀಗೆ ಮಾಡಿದಿ ಎಂದು ಹೇಳಿ ಅವನನ್ನು ಗದರಿಸಲಿಲ್ಲ. ಇದಲ್ಲದೆ ಅವನು ಬಹು ರೂಪವಂತನಾಗಿದ್ದನು.

7ಅಬ್ಷಾಲೋಮನ ತರು ವಾಯ ಅವನ ತಾಯಿ ಅವನನ್ನು ಹೆತ್ತಳು. ಅವನು ಚೆರೂಯಳ ಮಗನಾದ ಯೋವಾಬನ ಸಂಗಡಲೂ ಯಾಜಕನಾದ ಎಬ್ಯಾತಾರನ ಸಂಗಡಲೂ ಮಾತನಾ ಡಿದನು; ಅವರು ಅದೋನೀಯನನ್ನು ಹಿಂಬಾಲಿಸಿ ಅವನಿಗೆ ಸಹಾಯಕರಾಗಿದ್ದರು.

8ಆದರೆ ಯಾಜಕ ನಾದ ಚಾದೋಕನೂ ಯೆಹೋಯಾದಾವನ ಮಗ ನಾದ ಬೆನಾಯನೂ ಪ್ರವಾದಿಯಾದ ನಾತಾನನೂ ಶಿಮ್ಮಿಯೂ ರೇಗಿಯೂ ದಾವೀದನ ಪರಾಕ್ರಮ ಶಾಲಿಗಳೂ ಅದೋನೀಯನ ಸಂಗಡ ಹೋಗಲಿಲ್ಲ.

9ಆಗ ಅದೋನೀಯನು ರೋಗೆಲ್‌ ಬಳಿಯಲ್ಲಿರುವ ಚೋಹೆಲೆತ್‌ ಎಂಬ ಕಲ್ಲಿನ ಹತ್ತಿರ ಕುರಿಗಳನ್ನೂ ಎತ್ತುಗಳನ್ನೂ ಕೊಬ್ಬಿದ ಪಶುಗಳನ್ನೂ ಕೊಲ್ಲಿಸಿ ಅರಸನ ಮಕ್ಕಳಾದ ತನ್ನ ಸಮಸ್ತ ಸಹೋದರರನ್ನೂ ಅರಸನ ಸೇವಕರಾದ ಸಮಸ್ತ ಯೆಹೂದದ ಜನರನ್ನೂ ಕರೆದನು.

೧ ಅರಸುಗಳು 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी